Published
4 hours agoon
By
Akkare News
ಪುತ್ತೂರು: ವರ್ಣಕುಂಚ ಕಮರ್ಷಿಯಲ್ ಆರ್ಟಿಸ್ಟ್ ಅಸೋಸಿಯೇಶನ್ (ರಿ.) ಪುತ್ತೂರು ಇವರ ವತಿಯಿಂದ ವಾಹನ ಚಾಲಕರು ಹಾಗೂ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಗರದ ಪ್ರಮುಖ ರಸ್ತೆಗಳ ಹಂಪುಗಳಿಗೆ ಬಿಳಿ ಬಣ್ಣ ಬಳಿಯುವ ಜನ ಮನದ, ಅನೇಕ ಜೀವ ರಕ್ಷಣೆ ಮಾಡುವ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು.
ಪುತ್ತೂರು ನಗರದ ದರ್ಬೆ ಲಿಟ್ಲ್ ಫ್ಲವರ್ ಶಾಲೆ ಬಳಿ ಹಾಗೂ ಬೊಳುವಾರಿನ ವಿಶ್ವಕರ್ಮ ಸಭಾಭವನದ ಸಮೀಪದ ಮುಖ್ಯ ರಸ್ತೆಯ ಹಂಪುಗಳಿಗೆ ಬಿಳಿ ಬಣ್ಣದ ಮಾರ್ಕಿಂಗ್ ಮಾಡಲಾಯಿತು. ಹಂಪುಗಳಲ್ಲಿ ಗುರುತುಗಳಿಲ್ಲದ ಕಾರಣ ವಾಹನ ಚಾಲಕರು ಹಾಗೂ ಪ್ರಯಾಣಿಕರಿಗೆ ಅನಾನುಕೂಲವಾಗುತ್ತಿತ್ತು. ಈ ಸಮಸ್ಯೆಯನ್ನು ನಿವಾರಿಸುವ ಉದ್ದೇಶದಿಂದ ಸಂಘವು ಈ ಸೇವಾ ಕಾರ್ಯವನ್ನು ನಡೆಸಿದೆ ಎಂದು ಅಧ್ಯಕ್ಷ ವಿಘ್ನೇಶ್ ವಿಶ್ವಕರ್ಮ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅರುಣ್ ಆರ್ಟ್ಸ್ ಕಬಕದ ಅರುಣ್ ಕುಮಾರ್ ರೈ, ಗಣೇಶ್ ಡಿಜಿಟಲ್ ನ ಗಣೇಶನ್ ಎಂ.ವಿ. , ನಾಗ್ ಆರ್ಟ್ಸ್ ನ ನಾಗಪ್ಪ ಕೆ., ಮಿತ್ರ ಆರ್ಟ್ಸ್‌ನ ಹರೀಶ್ ಆಚಾರ್ಯ, ಸೀಮಾ ಆರ್ಟ್ಸ್‌ನ ರಾಜೇಶ್ ಕುಮಾರ್, ಗಿರಿ ಆರ್ಟ್ಸ್‌ನ ಗಿರೀಶ್ ಆಚಾರ್ಯ, ಚಾಂದ್ ಆರ್ಟ್ಸ್‌ನ ಶೇಖ್ ಇಂತಿಯಾಜ್, ಪ್ರಸಾದ್ ಆರ್ಟ್ಸ್‌ನ ಪ್ರಸಾದ್ ಕುಮಾರ್ ಪಿ., ಶಾಂತಿ ಡಿಜಿಟಲ್‌ನ ಸುರೇಶ್, ಸಿಂಗಾರ ಆರ್ಟ್ಸ್‌ನ ಬಾಲಕೃಷ್ಣ ಹಾಗೂ ಭಾವನಾ ಕಲಾ ಆರ್ಟ್ಸ್‌ನ ವಿಘ್ನೇಶ್ ವಿಶ್ವಕರ್ಮ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.