Published
13 hours agoon
By
Akkare News
ಪುತ್ತೂರು: ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿ Form-7ಅರ್ಜಿ ಸಲ್ಲಿಸಲಾಗಿದ ಎಂದು ಆರೋಪಿಸಿ ಪುತ್ತೂರು ತಾಲೂಕು ಬಿಎಲ್‌ಎ ಸಂತೋಷ್ ಭಂಡಾರಿ ಅವರು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಹಾಗೂ ಸಹಾಯಕ ಕಮಿಷನರ್‌ಗೆ ದೂರು ನೀಡಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 177 ರ ಬೀಪಾತು, ಅಶ್ರಫ್ ಹಸೈನಾರ್ ಕೆ., ಎಂ. ಅಬ್ದುಲ್ ರಹಿಮಾನ್ ಹಾಗೂ ಸಂಶುದ್ದೀನ್ ಅವರ ಹೆಸರುಗಳನ್ನು ಅಳಿಸುವಂತೆ ಹರೀಶ್ ಬಿಜತ್ರೆ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಬಂಧವರು ತಮ್ಮ ವಿಳಾಸದಲ್ಲಿಯೇ ವಾಸ ಮಾಡುತ್ತಿದ್ದು, ಮತದಾರರಾಗಿ ಮುಂದುವರಿಯಲು ಅರ್ಹರು, ಆದರೂ ಅವರು ಸ್ಥಳಾಂತರಗೊಂಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.



