Connect with us

ಕ್ರೈಮ್ ನ್ಯೂಸ್

ಗಂಡ ಹೆಂಡತಿಯ ಜಗಳ ಪತ್ನಿಯ ಮೂಗನ್ನೇ ಕಚ್ಚಿತುಂಡರಿಸಿದ ಪತಿರಾಯ…

Published

on

ಶಿವಮೊಗ್ಗ: ಸಾಲದ ವಿಚಾರಕ್ಕೆ ಗಂಡ- ಹೆಂಡತಿಯ ನಡುವೆ ಜಗಳ ನಡೆದು ಪತಿರಾಯ ಪತ್ನಿಯ ಮೂಗನ್ನೇ ಹಲ್ಲಿನಿಂದ ಕಚ್ಚಿ ತುಂಡರಿಸಿದ ಘಟನೆ ನಡೆದಿದೆ.


ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದ ದಂಪತಿಯ ನಡುವೆ ಗಲಾಟೆ ನಡೆದಿದೆ. ಪತ್ನಿ ವಿದ್ಯಾ (30) ರ ಮೂಗಿನ ಮುಂಭಾಗ ಸಂಪೂರ್ಣ ತುಂಡಾಗಿದೆ. ವಿದ್ಯಾ ಅವರ ಪತಿ ವಿಜಯ್ ಈ ಕೃತ್ಯ ನಡೆಸಿದ್ದಾನೆ.

ಗಾಯಗೊಂಡಿದ್ದ ವಿದ್ಯಾಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯ ವಿವರ

ಸಾಲದ ಕಂತು ಕಟ್ಟುವ ವಿಚಾರಕ್ಕೆ ದಂಪತಿಯ ನಡುವೆ ಜು.8 ರ ಮಧ್ಯಾಹ್ನ ಗಲಾಟೆಯಾಗಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ವಿಜಯ್ ಪತ್ನಿ ವಿದ್ಯಾಗೆ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಗಲಾಟೆ ವೇಳೆ ಕೆಳಗೆ ಬಿದ್ದ ಪತ್ನಿ ವಿದ್ಯಾಳ ಮೂಗು ಕಚ್ಚಿ ತುಂಡರಿಸಿದ್ದಾನೆ. ಸ್ಥಳೀಯರು ತಕ್ಷಣವೇ ಗಲಾಟೆ ಬಿಡಿಸಿ, ಆಸ್ಪತ್ರೆಗೆ ಕಳುಹಿಸಿದ್ದಾರೆ.

ಚೆನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಇದೀಗ ಗಂಡ ವಿಜಯ್ ವಿರುದ್ಧವೇ ಪತ್ನಿ ವಿದ್ಯಾ ಠಾಣೆ ಮೆಟ್ಟಿಲೇರಿದ್ದಾರೆ.

ಹಲ್ಲೆ ಸಂಬಂಧ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಮೆಡಿಕಲ್ ಲೀಗಲ್ ಕೇಸ್‌ ನಮೂದು ಮಾಡಲಾಗಿದ್ದು, ಬಳಿಕ ಜಯನಗರ ಠಾಣೆಯಿಂದ ದೂರು ದಾವಣಗೆರೆಯ ಚನ್ನಗಿರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.



 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version