ಬಿಂದು ಸಂಸ್ಥೆಯಲ್ಲಿ ಹಲವಾರು ಹೊಸ ಉತ್ಪನ್ನಗಳನ್ನು ಇತ್ತೀಚೆಗಷ್ಟೇ ಮಾರುಕಟ್ಟೆಗೆ ಬಿಡುಗಡೆಗಳಿಸಲಾಗಿದೆ. ಅಂತೆಯೇ “ಬಿಂದು ” ಉತ್ಪನ್ನಗಳ ಸಾಲಿಗೆ ‘BINDU SPARKLING PINEAPPLE DRINK’ ಉತ್ಪನ್ನವು ಹೊಸ ಉತ್ಪನ್ನವಾಗಿ ಸೇರಿಕೊಂಡಿತು. ಈ ಉತ್ಪನ್ನವನ್ನು 18/08/2026ರಂದು HDFC BANK EXECUTIVE VICE PRESIDENT-MR.PRAFUL CHHAJER, SENOIR VICE PRESIDENT-MR.NAGENDRA HALADIPURರವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.ಬಿಂದು ಸಂಸ್ಥೆಯ ಆಡಳಿತ ನಿರ್ದೇಶಕರಾದ ಸತ್ಯಶಂಕರ್, ಕಾರ್ಯನಿರ್ವಾಹಕ ನಿರ್ದೇಶಕರಾದ ರಂಜಿತಾ ಶಂಕರ್, ನಿರ್ದೇಶಕರಾದ ಮೇಘಾ ಶಂಕರ್, ಮನಸ್ವಿತ್ ಶಂಕರ್, CFO ಶ್ರೀ ಗೋಕುಲ್ ಪೈ, HDFC BANKನ ಶ್ರೀ ವಿಭಾಶ್ ರಂಜನ್, ಶಬರಿ ಶೆಟ್ಟಿ, ಅಕ್ಷಯ್ ರವರು ಉಪಸ್ಥಿತರಿದ್ದರು. BINDU SPARKLING PINEAPPLE DRINK’ (ಪೈನಾಪಲ್) ಹಣ್ಣಿನ ಸ್ನಾದದಿಂದ ತಯಾರಿಸಲಾಗಿದೆ. ಇದು ಉತ್ತಮವಾದ ತಂಪು ಪಾನೀಯವಾಗಿದ್ದು, ಜನರ ಅಚ್ಚುಮೆಚ್ಚಿನ ತಂಪು ಪಾನೀಯವಾಗುವುದರಲ್ಲಿ ಯಾವೂದೇ ಸಂದೇಹವಿಲ್ಲ” ಎಂದು ಈ ಸಂದರ್ಭದಲ್ಲಿ ಬಿಂದು ಸಂಸ್ಥೆಯ ಆಡಳಿತ ನಿರ್ದೇಶಕರಾದ ಸತ್ಯಶಂಕರ್‌ರವರು ಹೇಳಿದರು. BINDU SPARKLING PINEAPPLE DRINKಗೆ ಉತ್ತಮ ಪ್ರತಿಕ್ರಿಯೆ ಸಿಗಲಿ, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಲಭಿಸಲಿ. ಇಡೀ ರಾಷ್ಟ್ರದಾದ್ಯಂತ ಹಾಗೂ ವಿದೇಶಿ ಮಾರುಕಟ್ಟೆಗೆ ರಫ್ತಾಗಲಿ, ಇನ್ನೂ ಹೆಚ್ಚಿನ ನವ ಮಾದರಿಯ ಉತ್ಪನ್ನಗಳನ್ನು ತಯಾರಿಸಿ ಬಿಂದು ಸಂಸ್ಥೆಯ ಕೀರ್ತಿ ಬೆಳಗಲಿ” ಎಂದು HDFC BANKನ Executive Vice President ಪ್ರಫುಲ್ ಛಾಜರ್ ಮತ್ತು Senior Vice President ನಾಗೇಂದ್ರ ಹಲಾಡಿಪುರ ಶುಭ ಹಾರೈಸಿದರು. ಆಡಳಿತ ನಿರ್ದೇಶಕ ಸತ್ಯಶಂಕರ್, ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್, ನಿರ್ದೇಶಕರಾದ ಮೇಘಾ ಶಂಕರ್, ಮನಸ್ವಿತ್ ಶಂಕರ್, CFO ಗೋಕುಲ್ ಪೈ, ವಿಭಾಶ್ ರಂಜನ್, ಶಬರಿ ಶೆಟ್ಟಿ, ಅಕ್ಷಯ್ ಉಪಸ್ಥಿತರಿದ್ದರು.