Published
7 months agoon
By
Akkare Newsದಿನಾಂಕ 31/5/2024 ನೇ ಶುಕ್ರವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿ0ಬಾಡಿ ಶಾಲೆ ಇಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಹೊಸದಾಗಿ ಶಾಲೆಗೆ ದಾಖಲಾದ ಮಕ್ಕಳನ್ನು ಶಿಕ್ಷಕರು ಶಾಲಾ ಗೇಟಿನ ಬಳಿಯಿಂದ ಆರತಿ ಬೆಳಗಿ, ತಿಲಕವಿಟ್ಟು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಜಯ ಪ್ರಕಾಶ್ ಬದಿನಾರು, ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷರು ಶೇಖರ ಪೂಜಾರಿ, ಉಪಾಧ್ಯಕ್ಷರು ಸುರೇಶ್ ಶೆಟ್ಟಿ, ಶಾಲಾ ಮುಖ್ಯ ಗುರುಗಳು ಬಾಲಕೃಷ್ಣ ಎನ್. ಪುಟಾಣಿಗಳಿಗೆ ಹೂ ಗುಚ್ಛ ನೀಡಿ ಸ್ವಾಗತಿಸಿದರು. ತದನಂತರ ವಾದ್ಯ ಘೋಷದೊಂದಿಗೆ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಮಾತನಾಡಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ನಮ್ಮೆಲ್ಲರ ಸಹಕಾರವಿದೆ ಎಂದು ಶುಭ ಹಾರೈಸಿದರು.
ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷರು ಶೇಖರ ಪೂಜಾರಿಯವರು ಮಾತನಾಡಿ ಶಾಲಾ ಅಭಿವೃದ್ದಿಗೆ ಪೋಷಕರ, ಶಿಕ್ಷಕರ ಸಹಕಾರ ಸದಾ ಇರಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಎಸ್. ಡಿ. ಎಮ್. ಸಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಶಾಲಾ ಮುಖ್ಯ ಗುರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್. ಡಿ. ಎಮ್. ಸಿ. ಸದಸ್ಯರು, ಪೋಷಕರು, ಗ್ರಂಥ ಪಾಲಕಿ ಕುಸುಮ ವಿ. ರೈ, ಆಶಾ ಕಾರ್ಯಕರ್ತೆ ಪವಿತ್ರ, ಶಿಕ್ಷಕಿಯರು,ವಿದ್ಯಾರ್ಥಿಗಳು ಮತ್ತು ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಶಾಲಾ ಎಸ್. ಡಿ. ಎಮ್. ಸಿ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸಿಹಿ ತಿಂಡಿ ಮತ್ತು ಸಿಹಿ ಊಟದ ವ್ಯವಸ್ಥೆ ಮಾಡಿದ್ದರು.