Published
6 months agoon
By
Akkare Newsಪುತ್ತೂರು: ಕೃಷ್ಣ ನಗರದ ಅಲುಂಬುಡ ಎಂಬಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಶಿಕ್ಷಕರಾಗಿರುವ ಶ್ರೀಯುತ ಹರಿಪ್ರಸಾದ್ ಪಿಕೆ ರವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಯೋಗದಿಂದ ನಮ್ಮ ಶಾರೀರಿಕ ಹಾಗೂ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಒತ್ತಡ ರಹಿತ ಬದುಕನ್ನು ನಡೆಸಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎವಿಜಿ ಶಾಲೆಯ ಅಧ್ಯಕ್ಷರಾಗಿರುವ ಶ್ರೀಯುತ ವೆಂಕಟರಮಣ ಗೌಡ ಕಳುವಾಜೆ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಯೋಗ ತರಬೇತಿದಾರರಾಗಿ ಶ್ರೀಮತಿ ಲಲಿತ ಮತ್ತು ಶ್ರೀಯುತ ಸತೀಶ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕಿ ಶ್ರೀಮತಿ ಹರ್ಷಿತಾರವರು ಪ್ರಾರ್ಥಿಸಿ, ಶ್ರೀಮತಿ ಶ್ರೇಯರವರು ಸ್ವಾಗತ ಭಾಷಣ ಮಾಡಿದರು. ಶಿಕ್ಷಕಿರಾದ ಶ್ರೀಮತಿ ರಾಧ ರವರು ವಂದನಾರ್ಪಣೆ ಮಾಡಿದರು. ಶಾಲಾ ಸಹ ಶಿಕ್ಷಕಿಯರಾದ ಶ್ರೀಮತಿ ವನಿತಾ, ಶ್ರೀಮತಿ ಸೂರ್ಯಕಲಾ, ಶ್ರೀಮತಿ ರಂಜಿತಾ ರೈ, ಶ್ರೀಮತಿ ಚಂದ್ರಿಕಾ, ಶ್ರೀಮತಿ ರೀಮಾ ಲೋಬೊ, ಕುಮಾರಿ ಪ್ರಕ್ಷುತ ರವರು ಮತ್ತು ಮಕ್ಕಳು ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದರು. ಶ್ರೀಮತಿ ಯಶುಭ ರೈ ಕಾರ್ಯಕ್ರಮವನ್ನು ನಿರೂಪಿಸಿದರು.