Published
10 months agoon
By
Akkare Newsಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ, ಪುತ್ತೂರು ಇಲ್ಲಿನ ಭಾರತ್ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ದಳದ ವತಿಯಿಂದ ವನ ಮಹೋತ್ಸವ ವನ್ನು ಆಚರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ ಎಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ವನ ಮಹೋತ್ಸವದ ಅಗತ್ಯತೆ,ಪ್ರಕೃತಿಯ ಆಂತರ್ಯದ ಸತ್ವವನ್ನು ನಾವು ತಿಳಿದು ಕೊಳ್ಳುವ ಅನಿವಾರ್ಯತೆಯ ಕುರಿತು ಬೆಳಕು ಚೆಲ್ಲಿದರು.
ವೇದಿಕೆಯಲ್ಲಿ ಸ್ಕೌಟ್ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್,ಗೈಡ್ ಶಿಕ್ಷಕಿಯರಾದ ವಿಲ್ಮಾ ಫೆರ್ನಾಂಡಿಸ್ ಮತ್ತು ನಳಿನಾಕ್ಷಿ, ಸ್ಕೌಟ್ ಶಿಕ್ಷಕಿ ಭವ್ಯ, ಬುಲ್ ಬುಲ್ ಶಿಕ್ಷಕಿ ಜೋಸ್ಲಿನ್ ಪಾಯಸ್ ಮತ್ತು ಮಮತಾ, ಕಬ್ ಶಿಕ್ಷಕಿ ದಿವ್ಯ ಉಪಸ್ಥಿತರಿದ್ದರು.ಗೈಡ್ಸ್ ವಿದ್ಯಾರ್ಥಿನಿಯರಾದ ಗೈಡ್ ಹರ್ಷಿಕ ಮತ್ತು ಗೈಡ್ ವೀಕ್ಷಾ ವನ ಮಹೋತ್ಸವದ ಬಗ್ಗೆ ಭಾಷಣ ಮಾಡಿದರು.
ಗೈಡ್ಸ್ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಗೈಡ್ ತನ್ವಿ ಪಿ ಸ್ವಾಗತಿಸಿ, ಸ್ಕೌಟ್ ಆಕಾಶ್ ವಂದಿಸಿ,ಗೈಡ್ ಆರಾಧನಾ ಕಾರ್ಯಕ್ರಮ ನಿರೂಪಿಸಿದರು.
‘