ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶಾಲಾ ಚಟುವಟಿಕೆ

ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಬಾಬಾ ಜಯಂತಿ

Published

on

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ಯಲ್ಲಿ ದಿನಾಂಕ 23/11/24 ರಂದು ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ರವರ 99ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಜಯರಾಮ ಕೆದಿಲಾಯ ಶಿಬರ,ಮುಖ್ಯ ಅತಿಥಿಗಳಾದ ಶ್ರೀ ರಾಮಚಂದ್ರ ರಾವ್,ನಿವೃತ ಪ್ರಿನ್ಸಿಪಾಲ್, ಅಳಿಕೆ ಸತ್ಯ ಸಾಯಿ ವಿದ್ಯಾಸಂಸ್ಥೆ,ಶಾಲಾ ಸಂಚಾಲಕರಾದ ಶ್ರೀ ಭಾಸ್ಕರ್ ಆಚಾರ್ ಹಿಂದಾರ್,ಕಾರ್ಯದರ್ಶಿ ಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ,ಆಡಳಿತ ಮಂಡಳಿಯ ಸದಸ್ಯರುಗಳಾದಶ್ರೀ ಪ್ರಸನ್ನ ಭಟ್ ಹಾಗೂಶ್ರೀ ಅಶೋಕ್ ಕುಮಾರ್ ಪುತ್ತಿಲಮುಖ್ಯ ಗುರುಗಳಾದ ಶ್ರೀಮತಿ ಜಯಮಾಲಾ ವಿ. ಎನ್ ರವರು ಉಪಸ್ಥಿತರಿದ್ದರು.

ಅತಿಥಿಗಳಾದ ಶ್ರೀ ರಾಮಚಂದ್ರ ರಾವ್ ರವರು ಶ್ರೀ ಸತ್ಯಸಾಯಿ ಬಾಬಾರ ತತ್ವಾದರ್ಶಗಳನ್ನು ಮಕ್ಕಳಿಗೆ ಮನ ಮುಟ್ಟುವ ಹಾಗೆ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಆದ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಬಾಳಿ ಎಂದು ಹಿತವಚನ ನುಡಿದರು.

 

ಶ್ರೀ ಪ್ರಸನ್ನ ಭಟ್ ರವರು ಮಾತನಾಡುತ್ತಾ ಬಾಬಾ ಜಯಂತಿ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಸರ್ವ ಧರ್ಮಿಯರರಿಂದಲೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ . ಸ್ವಾಮಿ ತತ್ವಗಳಾದ ಸತ್ಯಧರ್ಮ,ಶಾಂತಿ, ಪ್ರೇಮವನ್ನು ಬೆಳೆಸಿ ಜೀವನದಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಲ್ಲಿ ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಶ್ರೀಯುತ ಜಯರಾಮ ಕೆದಿಲಾಯ ರವರು
ಶ್ರೀ ಭಗವಾನ್ ಬಾಬಾರ 99ನೇ ಜನ್ಮದಿನದ ಶುಭಾಶಯ ಕೋರುತ್ತಾ ಎಲ್ಲರಿಗೂ ಬಾಬಾ ರವರ ಅನುಗ್ರಹ ಇರಲಿ ಬಾಬಾರ ಶಕ್ತಿ ನಮ್ಮನ್ನು ಕಾಪಾಡಲಿ ಎಂದರು.

 

 

 

ನಂತರ ಭಜನೆ, ಮಂಗಳಾರತಿ ನಡೆಯಿತು.
ಶಾಲಾ ಮುಖ್ಯಪಾಧ್ಯಾಯರಾದ ಶ್ರೀಮತಿ ಜಯಮಾಲಾ ವಿ. ಎನ್ ರವರು ಎಲ್ಲರನ್ನು ಆದರದಿಂದ ಸ್ವಾಗತಿಸಿದರು.

ಶ್ರೀಮತಿ ಮಂಜುಳಾ ಗೌಡ ರವರುಧನ್ಯವಾದಗೈದರು.
ಕಾರ್ಯಕ್ರಮವನ್ನು ಶ್ರೀಮತಿ ಸೌಮ್ಯ.ಎಮ್ ನಿರೂಪಿಸಿದರು

ಕಾರ್ಯಕ್ರಮದಲ್ಲಿ ಸಾಯಿ ಭಕ್ತರು,ಶಿಕ್ಷಕ – ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ಎಲ್ಲರಿಗೂ ಸಿಹಿ ಭೋಜನದ ವ್ಯವಸ್ಥೆ ಇತ್ತು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version