ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಶಾಲಾ ಚಟುವಟಿಕೆ

ಗೊಳ್ತಮಜಲ್ ಸರಕಾರಿ ಪ್ರೌಢ ಶಾಲೆಯ 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Published

on

ಶಾಲಾ ಶೈಕ್ಷಣಿಕ ಹಂತಗಳಲ್ಲಿ ಮತ್ತು ಭೌತಿಕ ವಿಚಾರಗಳಿಗೆ ಪೋಷಕರು ಶಿಕ್ಷಕರ ಜೊತೆ ಜೊತೆಯಾಗಿ ಸೇರಿ ಕೆಲಸಗಳಲ್ಲಿ ತೊಡಗಿದಾಗ ಅಭಿವೃದ್ಧಿಯು ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ, ತರಗತಿ ಕೋಣೆಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರು ಮುತುವರ್ಜಿ ವಹಿಸುವಂತೆ ಮನೆಯಲ್ಲಿ jವಿದ್ಯಾರ್ಥಿಯ ಜೊತೆ ಪೋಷಕರು ಶೈಕ್ಷಣಿಕ ವಿಚಾರಗಳಿಗೂ ಬೆರೆಯಬೇಕು ಆಗ ಶೈಕ್ಷಣಿಕ ಕಲಿಕೆಯು ಮಗುವಿಗೆ ಮಾನಸಿಕವಾಗಿ ಹೆಚ್ಚು ಬಲವನ್ನು ತುಂಬುತ್ತದೆ ಎಂದು ನಿವೃತ ಬಿ ಆರ್ ಪಿ ನಾರಾಯಣ ಗೌಡ ಅಭಿಪ್ರಾಯ ಪಟ್ಟರು.

ಅವರು ಶನಿವಾರ ಬಂಟ್ವಾಳ ತಾಲೂಕಿನ ಗೊಳ್ತಮಜಲ್ ಸರಕಾರಿ ಪ್ರೌಢ ಶಾಲೆಯ 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಕಾರ್ಯಧ್ಯಕ್ಷರಾದ ಚಂದ್ರಶೇಖರ್ ವಹಿಸಿದ್ದರು.

ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆ ಗೋಳ್ತಮಜಲುವಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಪದೊನ್ನತಿ ಹೊಂದಿ ವ್ಯವಸ್ಥಾಪಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಗೆ. ಯೋಜರಾದ ಪುಷ್ಪರಾಜ್ ಬಿ, ಶಾಲೆಯ ಸೌಂದರ್ಯ ಹೆಚ್ಚಿಸಲು ಸಹಕರಿಸಿದ ಕಡಶಿವಾಲಯ ಶಾಲಾ ಕಲಾ ಶಿಕ್ಷಕ ಸತ್ಯಶಂಕರ್, ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಾಲಾ ದೈಹಿಕ ಶಿಕ್ಷಕ ಪ್ರಕಾಶ್ ಟಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಿಗೆ ನಡೆಸಿದ ಸಾಂಸ್ಕೃತಿಕ ಸ್ಪರ್ಧೆಗಳ ಹಾಗೂ ಕ್ರೀಡಾ ಸ್ಪರ್ಧೆಗಳ, ಹಾಗೂ ಕಲಿಕಾ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೇ ಪ್ರಶಸ್ತಿ ಪತ್ರ, ಹಾಗೂ ಬಹುಮಾನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗೊಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯರಾದ ಪುರುಷೋತ್ತಮ್, ಎಸ್ ಡಿ ಎಂ ಸಿ ಸದಸ್ಯರುಗಳಾದ ಬಾಲಕೃಷ್ಣ ಕೊಟ್ಟಾರಿ, ನಾಗೇಶ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ಶಾಲಾ ನಾಯಕಿ ಉಪಸ್ಥಿತರಿದ್ದರು.

 

 

 

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕನ್ನಡ ಶಿಕ್ಷಕಿ ಸುನಿತಾ ಸ್ವಾಗತಿಸಿ, ಸದರಿ ಸಾಲಿನ ವರದಿ ವಾಚನವನ್ನು ಶಾಲಾ ಮುಖ್ಯ ಶಿಕ್ಷಕ ರಮೇಶ್ ವಾಚಿಸಿದರು. ವಿಜ್ಞಾನ ಶಿಕ್ಷಕ ಸತ್ಯಶಂಕರ್ ಬಹುಮಾನಿತರ ಪಟ್ಟಿ ವಾಚಿಸಿ,ಹಿಂದಿ ಶಿಕ್ಷಕ ಶಂಕರ್ ಪಾವಸ್ಕರ್ ವಂದಿಸಿದರು. ಶಿಕ್ಷಕಿ ಸುಜಾತ ಎಂ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

 

ಈ‌ ಕುರಿತು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಪ್ರಶಾಂತ್ ಮುನ್ನೋಳ್ಳಿ, ಸಿಪಿಐ ಸಂತೋಷ್ ಹಳ್ಳೂರ್, ಪಿಎಸ್ಐ ಜಿ.ಜಿ. ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ತನಿಖೆ ಕೈಗೊಂಡಿದ್ದಾರೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version