Published
5 months agoon
By
Akkare News
ಪುತ್ತೂರು : ಅ 20 ರಂದು ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ “ಅಶೋಕ ಜನ-ಮನ 2025” ವಸ್ತ್ರ ವಿತರಣೆ ಕಾರ್ಯಕ್ರಮ ದಲ್ಲಿ ಗೂಡು ದೀಪ ಸ್ಪರ್ಧೆ ಯನ್ನು ಆಯೋಜಿಸಲಾಗಿದೆ.
ಗೂಡು ದೀಪ ಸ್ಪರ್ಧೆಯಲ್ಲಿ ಎರಡು ವಿಂಗಡಗಳನ್ನು ಮಾಡಲಾಗಿದೆ,ಸೀನಿಯರ್ ಮತ್ತು ಜೂನಿಯರ್ ವಿಭಾಗ. 16 ವರ್ಷಕ್ಕೆ ಮೇಲ್ಪಟ್ಟು ಸೀನಿಯರ್ ವಿಭಾಗ, ಬಹುಮಾನ ಪ್ರಥಮ 7500 ,ದ್ವಿತೀಯ 5000, ತೃತೀಯ 2500 ನಿಗದಿ ಮಾಡಲಾಗಿದೆ. ಜೂನಿಯರ್ 16 ವರ್ಷದ ಕೆಳಗಿನವರು. ಜೂನಿಯರ್ ವಿಭಾಗದ ಬಹುಮಾನ ಪ್ರಥಮ 5000, ದ್ವಿತೀಯರೂ.3,000,ತೃತೀಯ 1500.ಸಂಘಟಕರ ತೀರ್ಮಾನವೇ ಅಂತಿಮ. ಎಲ್ಲಾ ಗೂಡು ದೀಪಗಳು ಮನೆಯಲ್ಲೇ ಮಾಡಿ ತರುವಂಥದ್ದು, ರೆಡಿ ಮೆಡ್ ಗೂಡು ದೀಪ ಕ್ಕೆ ಅವಕಾಶ ಇಲ್ಲ, ಭಾಗವಹಿಸುವವರು ಬೆಳಿಗ್ಗೆ 11:30ಕ್ಕೆ ಒಳಗಾಗಿ ಭಾಗವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಗೂಡು ದೀಪ ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿ ಸಂಘಟಕರು ತಿಳಿಸಿರುತ್ತಾರೆ.