Published
4 months agoon
By
Akkare News
ಪುತ್ತೂರು: ರಾಜ್ಯಾದ್ಯಂತ ಹಲವು ಶಾಖೆಗಳನ್ನು ತೆರೆದು ಪುಸ್ತಕ ಮಾರಾಟ ಮಳಿಗೆಯಲ್ಲಿ ಜನಪ್ರಿಯವಾಗಿರುವ ಕರ್ನಾಟಕದ ಅತೀ ದೊಡ್ಡ ಪುಸ್ತಕ ಮಳಿಗೆ ಎಸ್.ಎಲ್.ವಿ ಬುಕ್ ಹೌಸ್ ಇದರ ನೂತನ ಶಾಖೆ ಪುತ್ತೂರಿನ ನೆಹರೂ ನಗರದಲ್ಲಿ ಇದೇ ನವೆಂಬರ್ 15 ರಂದು ಬೆಳಗ್ಗೆ ಶುಭಾರಂಭಗೊಳ್ಳಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಎಸ್.ಎಲ್.ವಿ ಬುಕ್ ಹೌಸ್ ಮಳಿಗೆಯಲ್ಲಿ ಶಾಲಾ ಮಕ್ಕಳಿಗೆ ಬೇಕಾಗುವ ಎಲ್ಲಾ ಪುಸ್ತಕಗಳು, ಸ್ಟೇಷನರಿಗಳು, ಗಿಫ್ಟ್ ಐಟಂಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕಗಳು, ಕ್ಯಾರೆಮ್ ಬೋರ್ಡ್, ಚೆಸ್ ಸೇರಿದಂತೆ ಆಟದ ಸಾಮಾಗ್ರಿಗಳು, ಯೋಗ ಮ್ಯಾಟ್‌ಗಳು ಲಭ್ಯವಿದೆ. ಶುಭಾರಂಭದಂದು ಖರೀದಿ ಮಾಡುವ ಎಲ್ಲಾ ಗ್ರಾಹಕರಿಗೂ 40% ವರೆಗೂ ಡಿಸ್ಕೌಂಟ್ ಆಫರ್ ನೀಡಲಾಗಿದೆ.
ನವೆಂಬರ್ 15 ರಂದು ಪುತ್ತೂರು ನೆಹರೂ ನಗರದಲ್ಲಿರುವ ಕಾಲೇಜು ಕಟ್ಟಡದಲ್ಲಿ ಶುಭಾರಂಭಗೊಳ್ಳುತ್ತಿರುವ ಎಸ್ ಎಲ್ ವಿ ಬುಕ್ ಹೌಸ್ ನ ಕಾರ್ಯಕ್ರಮಕ್ಕೆ ಎಸ್ ಎಲ್ ವಿ ಗ್ರೂಪ್ಸ್ ಮಾಲಕರಾದ ಶ್ರೀ ದಿವಾಕರ್ ದಾಸ್ ನೇರ್ಲಾಜೆ ಮತ್ತು ಹೇಮಾವತಿ ದಿವಾಕರ್ ದಾಸ್ ನೇರ್ಲಾಜೆ ರವರು, ಹಾಗೂ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಸರ್ವರನ್ನೂ ಆಮಂತ್ರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.