Published
7 hours agoon
By
Akkare News
ಬೆಂಗಳೂರಿನ ನಿವಾಸಿಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ಅಪರೂಪದ ಸಾಧನೆ ಮಾಡಿದ ದಂಪತಿ. ಇವರು ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿವರೆಗೆ ಇರುವ ತೆರೆದ ಸಮುದ್ರದ ಸವಾಲಿನ ಮಾರ್ಗವನ್ನು ಯಶಸ್ವಿಯಾಗಿ ಕ್ರಮಿಸಿದ್ದಾರೆ. ಸಮುದ್ರದ ಬಲಿಷ್ಠ ಅಲೆಗಳು, ಅನಿರೀಕ್ಷಿತ ಹವಾಮಾನ ಬದಲಾವಣೆ ಮತ್ತು ದೈಹಿಕ ಬಳಲಿಕೆಯ ನಡುವೆಯೂ ದಂಪತಿ ತಮ್ಮ ಗುರಿಯನ್ನು ಮುಟ್ಟುವಲ್ಲಿ ಯಶಸ್ವಿಯಾದರು. ಈ ಸಾಹಸದ ಉದ್ದಕ್ಕೂ ಇವರಿಗೆ ಬೆಂಬಲವಾಗಿ ಪ್ಯಾರಾಮೆಡಿಕ್ಸ್ ತಂಡಗಳು, ಕೋಸ್ಟ್ ಗಾರ್ಡ್ ಹಾಗೂ ತಾಂತ್ರಿಕ ಸಿಬ್ಬಂದಿಗಳು ದೋಣಿಗಳ ಮೂಲಕ ಸಾಥ್ ನೀಡಿದ್ದರು.