Published
3 hours agoon
By
Akkare News
ನಟ – ರಾಜಕಾರಣಿಯಾಗಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರು ಮೊದಲ ಪ್ರಯತ್ನದಲ್ಲೇ ಭಾರೀ ಯಶಸ್ಸು ಕಂಡಿದ್ದಾರೆ. ಅವರು ಈ ಬಾರಿ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಎರಡೂ ವಿಧಾನಸಭಾ ಕ್ಷೇತ್ರಗಳಲ್ಲೂ ವಿಜಯ್ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇದೀಗ ಒಂದು ವಿಧಾನಸಭಾ ಕ್ಷೇತ್ರವನ್ನು ತ್ರಿಷಾ ಅವರಿಗೆ ಬಿಟ್ಟು ಕೊಡುವುದಕ್ಕೆ ವಿಜಯ್ ಮುಂದಾಗಿದ್ದಾರೆ ಎಂದು ನ್ಯೂಸ್ 24 ವರದಿ ಮಾಡಿದೆ.