Published
8 hours agoon
By
Akkare News
ಇದೇ ವೇದಿಕೆಯಲ್ಲಿ ತಮ್ಮ ರಾಜಕೀಯ ನಡೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ವಿರೋಧ ಪಕ್ಷಗಳ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ನನಗೆ ಕೆಲಸ ಮಾಡುವುದು ಎಂದರೆ ಒಂದು ರೀತಿಯ ಹುಚ್ಚು. ಕೇವಲ ಅಧಿಕಾರದಲ್ಲಿ ಇದ್ದಾಗ ಮಾತ್ರವಲ್ಲ, 2013ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಾಗಲೂ ಸಹ ನಾನು ಧೃತಿಗೆಡಲಿಲ್ಲ. ಜನರ ಮಧ್ಯೆಯೇ ಇದ್ದು ನಿರಂತರವಾಗಿ ಕೆಲಸ ಮಾಡಿದ್ದೇನೆ. ಬೇರೆಯವರಂತೆ ಜನರ ಮುಂದೆ ಸುಖಾಸುಮ್ಮನೆ ನಾಟಕ ಮಾಡುವುದು ನನಗೆ ಗೊತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವುದೊಂದೇ ನನಗೆ ತಿಳಿದಿರುವ ವಿದ್ಯೆ” ಎಂದು ಮಾರ್ಮಿಕವಾಗಿ ನುಡಿದರು.
ಹಿಂದಿನ ಶಾಸಕರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ ಅವರು, “ಹಿಂದೆ ಇಲ್ಲಿಂದ ಆಯ್ಕೆಯಾದವರು ಕೇವಲ ‘ಹಿಂದುತ್ವ, ಹಿಂದುತ್ವ’ ಎಂದುಕೊಂಡು ಓಡಾಡಿದ್ದನ್ನು ಬಿಟ್ಟರೆ, ಕ್ಷೇತ್ರದ ಅಭಿವೃದ್ಧಿಗಾಗಿ ಮತ್ಯಾವುದೇ ಕೆಲಸ ಮಾಡಿಲ್ಲ. ಆದರೆ ನಾನು ಬರೀ ಮಾತಿನಲ್ಲಿ ಹೇಳುವುದಿಲ್ಲ, ಅಭಿವೃದ್ಧಿ ಕೆಲಸಗಳನ್ನು ಕಾರ್ಯರೂಪಕ್ಕೆ ತಂದು ಜನರಿಗೆ ತೋರಿಸುತ್ತಿದ್ದೇನೆ. ಸಮಾಜಕ್ಕೆ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದೇನೆ” ಎಂದರು.