Connect with us

ಇತರ

ಅಲ್ಪ ಸಂಖ್ಯಾತ ಬಾಲಕರ ವಸತಿ ನಿಲಯ ಪ್ರಾರಂಭಿಸಲು ರಾಜ್ಯದ ವಸತಿ ಮತ್ತು ಅಲ್ಪಸಂಖ್ಯಾತ ಇಲಾಖಾ ಸಚಿವ ಝಮೀರ್ ಅಹ್ಮದ್ ಖಾನ್ ರವರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರ ಮನವಿ. ವಸತಿ ನಿಲಯದ ಮಂಜೂರಾತಿ ಸಚಿವರ ಅಸ್ತು.

Published

on

ಪುತ್ತೂರಿನಲ್ಲಿ ಖಾಲಿ ಇರುವ ಅಲ್ಪ ಸಂಖ್ಯಾತ ಇಲಾಖೆಯ ಕಾಮನ್ ಸರ್ವಿಸ್ ಸೆಂಟರ್ ನ ನೂತನ ಕಟ್ಟಡದಲ್ಲಿ ಅಲ್ಪ ಸಂಖ್ಯಾತ ಬಾಲಕರ ವಸತಿ ನಿಲಯ ಪ್ರಾರಂಭಿಸಲು ರಾಜ್ಯದ ವಸತಿ ಮತ್ತು ಅಲ್ಪಸಂಖ್ಯಾತ ಇಲಾಖಾ ಸಚಿವ ಝಮೀರ್ ಅಹ್ಮದ್ ಖಾನ್ ರವರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರ ಮನವಿ. ವಸತಿ ನಿಲಯದ ಮಂಜೂರಾತಿ ಸಚಿವರ ಅಸ್ತು.
ಪುತ್ತೂರು ನಗರ ಹಾಗೂ ಅದರ ಸುತ್ತ – ಮುತ್ತಲ ಗ್ರಾಮೀಣ ಪ್ರದೇಶಗಳಿಂದ ಶಿಕ್ಷಣಕ್ಕಾಗಿ ನಗರಕ್ಕೆ ಆಗಮಿಸುವ ಬಡ ಮತ್ತು ಮಧ್ಯಮ ವರ್ಗದ ಬಾಲಕರಿಗೆ ವಸತಿ ಸೌಲಭ್ಯ ತೀವ್ರವಾಗಿ ಕಂಡುಬರುತ್ತಿದೆ. ವಿಶೇಷವಾಗಿ ದೂರದ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಸುರಕ್ಷಿತ ಹಾಗೂ ಕೈಗೆಟಕುವ ವಸತಿ ವ್ಯವಸ್ಥೆಯಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಪುತ್ತೂರು ನಗರಕ್ಕೆ ಹೊಸದಾಗಿ ಬಾಲಕಕರ ವಸತಿ ನಿಲಯವನ್ನು ಮಂಜೂರುಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಇನ್ನು ವಿಶೇಷವಾಗಿ ಪುತ್ತೂರು ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡು ಪ್ರಸ್ತುತ ಖಾಲಿಯಾಗಿ ಇರುವ ಕಾಮನ್ ಸರ್ವಿಸ್ ಸೆಂಟರ್ ಕಟ್ಟಡವನ್ನು ಬಳಸಿ ಬಾಲಕರ ವಸತಿ ನಿಲಯ ನಿರ್ಮಾಣಗೊಂಡರೆ ಸರಕಾರಕ್ಕೆ ಹೆಚ್ಚುವರಿ ವೆಚ್ಚ ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕ ಅಸ್ತಿ ಸದುಪಯೋಗ ಆಗಲಿದೆ. ಆದುದರಿಂದ ಪರಿಶೀಲಿಸಿ ಪುತ್ತೂರು ತಾಲೂಕಿಗೆ ಅಲ್ಪ ಸಂಖ್ಯಾತ ಬಾಲಕರ ವಸತಿ ನಿಲಯ ಮಂಜೂರು ಮಾಡುವಂತೆ ಹಾಗೂ ಈಗಾಗಲೇ ನಿರ್ಮಾಣಗೊಂಡು ಖಾಲಿ ಇರುವ ಕಾಮನ್ ಸರ್ವಿಸ್ ಸೆಂಟರ್ ಕಟ್ಟಡದಲ್ಲಿ ವಸತಿ ನಿಲಯ ಪ್ರಾರಂಭಿಸುವಂತೆ ರಾಜ್ಯದ ವಸತಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖಾ ಸಚಿವರಾದ ಮಾನ್ಯ ಝಮೀರ್ ಅಹ್ಮದ್ ಖಾನ್ ರವರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರು ಲಿಖಿತ ಮನವಿ ಸಲ್ಲಿಸಿದ್ದು. ಸಚಿವರು ಶಾಸಕರ ಮನವಿಯಂತೆ ವಸತಿ ನಿಲಯ ಪ್ರಾರಂಭಿಸಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮನವಿ ಕೊಡುವ ಸಂದರ್ಭದಲ್ಲಿ ಶಾಸಕರೊಂದಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ದ ಕ ಜಿಲ್ಲಾಧ್ಯಕ್ಷ ಎಚ್. ಮಹಮ್ಮದ್ ಅಲಿ. ಕಾಂಗ್ರೆಸ್ ಮುಖಂಡ ರೋಷನ್ ರೈ ಬನ್ನೂರು ಉಪಸ್ಥಿತರಿದ್ದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version