ನೇತ್ರಾವತಿ ಆಟೋ ಚಾಲಕ–ಮಾಲಕರ ಸಂಘ (ರಿ.), ಉಪ್ಪಿನಂಗಡಿ ವತಿಯಿಂದ ಸಂಘದ ಪ್ರಥಮ ಮಾಸಿಕ ಸಭೆಯು ಮಾದರಿ ಶಾಲೆ, ಉಪ್ಪಿನಂಗಡಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಪಘಾತಕ್ಕೊಳಗಾದ ಸಂಘದ ಸದಸ್ಯರಾದ ಸಲಾವುದ್ದೀನ್, ಸರಳೀಕಟ್ಟೆ ಹಾಗೂ ಜಯರಾಮ ಕೆ.ಸಿ., ವಳಕಡಮ ಅವರಿಗೆ ಪ್ರಥಮ ಚಿಕಿತ್ಸಾ ಸಹಾಯಧನದ ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಫಾರೂಕ್ ಝಿಂದಗಿ, ಪ್ರಧಾನ ಕಾರ್ಯದರ್ಶಿ ಅಶೋಕ್ ಬಂಡಾಡಿ, ಉಪಾಧ್ಯಕ್ಷರಾದ ಅಣ್ಣಿ ಗೌಡ ಮಲ್ಲಕಲ್ಲು ಹಾಗೂ ಸೇಸಪ್ಪ ನೆಕ್ಕಿಲು, ಕೋಶಾಧಿಕಾರಿ ಖಲಂದರ್ ಶಾಫಿ, ಸಂಘಟನಾ ಕಾರ್ಯದರ್ಶಿ ಸತೀಶ್ ಶೆಟ್ಟಿ ಹೆನ್ನಾಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ಮಂಜುಶ್ರೀ, ವಿಜಯಕುಮಾರ್ ಕಜೆಕ್ಕಾರ್, ಅಬ್ದುಲ್ ಮಜೀದ್ ರಾಮನಗರ, ಯು.ಎಂ. ಬಶೀರ್ ಗಾಂಧಿ ಪಾರ್ಕ್, ಸಲೀಂ ಕರಾಯ, ಶಬೀರ್ ಕುದ್ಲೂರು, ಹನೀಫ್ ಆತ್ಮೀಯ ಮತ್ತು ರಾಘವೇಂದ್ರ ನಟ್ಟಿಬೈಲ್ ಉಪಸ್ಥಿತರಿದ್ದರು. ಅಪಘಾತದಂತಹ ಸಂಕಷ್ಟದ ಸಂದರ್ಭಗಳಲ್ಲಿ ಸದಸ್ಯರ ನೆರವಿಗೆ ನಿಲ್ಲುವ ಮೂಲಕ, ನೇತ್ರಾವತಿ ಆಟೋ ಚಾಲಕ–ಮಾಲಕರ ಸಂಘವು ತನ್ನ ಸದಸ್ಯರೊಂದಿಗೆ ಸದಾ ಒಗ್ಗಟ್ಟು, ಸಹಕಾರ ಮತ್ತು ಮಾನವೀಯತೆಯಿಂದ ನಿಂತಿದೆ ಎಂಬುದನ್ನು ಮತ್ತೊಮ್ಮೆ ಸಾರಿತು. ಸದಸ್ಯರ ಹಿತವೇ ಸಂಘದ ಮೊದಲ ಆದ್ಯತೆ.