ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕಾರ್ಪಾಡಿ ಸುಬ್ರಮಣ್ಯ ದೇವಸ್ಥಾನದ ಬ್ರಹ್ಮಕಲಶ , ತಾಲೂಕಿನ ವಿವಿದೆಡೆಯಿಂದ ಹರಿದು ಬಂದ ಹೊರೆಕಾಣಿಕೆ ,ಹೊರೆಕಾಣಿಕೆ ಮೆರವಣಿಗೆಯಲ್ಲಿ ಶಾಸಕ : ಅಶೋಕ್ ಕುಮಾರ್ ರೈಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಾಮಾನ್ಯ ಸ್ಥಳೀಯ
ಶಾಂತಿಮೊಗರು ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಯುವಂತೆ ಅಗ್ರಹಿಸಿ ಪ್ರತಿಭಟನೆ: ಒಂದು ವಾರದ ಸಮಯವಕಾಶ ಕೊಡಿ ಎಂದ ತಹಸೀಲ್ದಾರ್ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮೇ13ರಂದು ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ, ಪಲ್ಲಕ್ಕಿ, ಬಂಡಿ ಉತ್ಸವಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಾಮಾನ್ಯ ಸ್ಥಳೀಯ
ಕಡಬದಲ್ಲಿ ನಗರೋತ್ಥಾನ ಯೋಜನೆಯಡಿ ನಡೆದ ಕಾಮಗಾರಿಗಳ ಪರಿಶೀಲನೆ: ಜಿಲ್ಲಾಧಿಕಾರಿ ಪ್ರಶ್ನೆಗೆ ಎಂಜಿನಿಯರ್ , ಅಧಿಕಾರಿಗಳು ಬೆಬ್ಬೆಬ್ಬೆ!ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೇಳಿದ್ದು 50 ಲಕ್ಷ . ಸಿಕ್ಕಿದ್ದು ಒಂದೂವರೆ ಕೋಟಿ. ಶಾಸಕ ಅಶೋಕ್ ರೈಗಳ ಬಡವರ ಮೇಲಿನ ಕಾಳಜಿಗೆ ಸೈ ಎಂದ ಸಿಎಂಅಭಿನಂದನೆ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಾಮಾನ್ಯ ಸ್ಥಳೀಯ
ಸರ್ವೆಯ 30 ವರ್ಷಗಳಿಂದ ವಿವಾದದಲಿದ್ದ ರಸ್ತೆಗೆ ಮುಕ್ತಿ ನೀಡಿದ ಪುತ್ತೂರು ಶಾಸಕ ಶ್ರೀ ಅಶೋಕ್ ಕುಮಾರ್ ರೈ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳುಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ
ವಾಹನ ತರಬೇತಿ ಪರೀಕ್ಷಾ ಮೈದಾನ ವಾಹನ ತರಬೇತಿ ಶಾಲೆಯ ಮುಖ್ಯಸ್ಥರಿಂದ ಶಾಸಕರ ಭೇಟಿ ಮನವಿ ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು ಅಭಿನಂದನೆ ಸಲ್ಲಿಸಿದ ವಾಹನ ತರಬೇತಿ ಶಾಲೆಯ ಮುಖ್ಯಸ್ಥರುಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ
ಶ್ರೀ ಕ್ಷೇತ್ರ ಕಾಣಿಯೂರು ಕಾಣಿಯೂರು ಗ್ರಾಮ, ಕಡಬ,ನಾಗಶಿಲಾ ಪ್ರತಿಷ್ಠೆ, ರಕೇಶ್ವರಿ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ ಆಮಂತ್ರಣಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ವಿಶೇಷ ವರದಿ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಗ್ರಾಮ ಸುಭಿಕ್ಷ ಕಾರ್ಯಕ್ರಮದ ಅಂಗವಾಗಿ ನೆಟ್ಲಾ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ "ಸೀಯಾಳ ಅಭಿಷೇಕ"ಅಭಿನಂದನೆ ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಶಾಸಕ ಅಶೋಕ್ ಕುಮಾರ್ ರೈ ಯವರ ಸೂಚನೆಗೆ ಸ್ಪಂದಿಸಿದ : ದ. ಕ.ಜಿಲ್ಲಾಧಿಕಾರಿ ರೈತರ ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಲು ಪಡೆಯಲು ಆದೇಶ, ರೈತರ ಮುಖದಲ್ಲಿ ಮಂದಹಾಸಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಕರ್ನಾಟಕ ಕಾನೂನು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಾಣಿಜ್ಯ ವಿಶೇಷ ವರದಿ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮಂಗಳೂರು : ಸುರತ್ಕಲ್ NITK ಸ್ಟ್ರಾಂಗ್ ರೂಂ ಸೇರಿದ ಅಭ್ಯರ್ಥಿಗಳ ಭವಿಷ್ಯಕ್ಕೆ ಬಿಗಿ ಭದ್ರತೆ..!ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಚರ್ಚೆಗಳು ಚುನಾವಣೆ ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಲೋಕಸಭಾ ಚುನಾವಣೆ ರಾಜಕೀಯ ಪಕ್ಷಗಳಿಗೆ ಬೂತ್ ತೆರೆಯಲು ಹೊಸ ನಿಯಮ.ಪುತ್ತೂರು ಚುನಾವಣಾ ಅಧಿಕಾರಿ. ಇಲ್ಲಿದೆ ಫುಲ್ ಡೀಟೇಲ್ಸ್ 👇ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕುದ್ಮಾರು ಕೆಡೆಂಜಿಗುತ್ತು ಧರ್ಮ ಚಾವಡಿಯಲ್ಲಿ ಪುನರ್ ಪ್ರತಿಷ್ಠಾ ಕಲಶ, ಗೃಹಪ್ರವೇಶ, ಶ್ರೀ ಮದ್ಭಾಗವತ ಸಪ್ತಾಹಕ್ಕೆ ಚಾಲನೆಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಷ್ಟ್ರೀಯ ವಿಶೇಷ ವರದಿ ಶುಭಾರಂಭ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಲೋಕ ಕಲ್ಯಾಣಾರ್ಥವಾಗಿ ನಾಳೆ ಏ.22 ಮಹಾಲಿಂಗೇಶ್ವರ ದೇವಸ್ಥಾನದಲ್ಲಿ "ಸೀಯಾಳಭಿಷೇಕ"Published
3 months agoon
By
Akkare Newsಪುತ್ತೂರು:ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏ.21ರಿಂದ 28ರ ತನಕ ನಡೆಯಲಿರುವ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವಕ್ಕೆ ಏ.20ರಂದು ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.ಹಸಿರುವಾಣಿ ಸಮಿತಿ ಸಂಚಾಲಕ ಡಾ.ಸುರೇಶ್ ಪುತ್ತೂರಾಯರವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಭಾಗಗಳ ಭಕ್ತಾದಿಗಳಿಂದ ಅಭೂತಪೂರ್ವ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಗಿ ಹೊಸ ಇತಿಹಾಸ ಸೃಷ್ಟಿಯಾಗಿದೆ.
ತಾಲೂಕಿನ ವಿವಿಧ ಗ್ರಾಮಗಳ, ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳ ಮೂಲಕ ಸಂಗ್ರಹಗೊಂಡ ಹಸಿರುವಾಣಿಯು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಜಮಾವಣೆಗೊಂಡಿತು.ಸಂಜೆ ಹೊರೆಕಾಣಿಕೆ ಮೆರವಣಿಗೆಯು ನಡೆಯಿತು.ದೇವಸ್ಥಾನದ ಬಳಿಯಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ಅಶೋಕ್ ಕುಮಾರ್ ರೈ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಅರ್ಚಕರೂ ಆಗಿರುವ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸುಧಾಕರ ರಾವ್ ಆರ್ಯಾಪು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಬಳಿಕ ವಾಹನ ಮೆರವಣಿಗೆ ಮೂಲಕ ಸಾಗಿದ ಹೊರೆಕಾಣಿಕೆಯು ಮುಖ್ಯರಸ್ತೆ, ದರ್ಬೆ, ಮುಕ್ರಂಪಾಡಿ, ಸಂಪ್ಯ ತನಕ ಸಾಗಿ ಅಲ್ಲಿಂದ ಕಾಲ್ನಡಿಗೆ ಮೆರವಣಿಗೆ ಮೂಲಕ ದೇವಸ್ಥಾನ ತಲುಪಿತು.
ವಿದ್ಯಾನಿ ಸರಸ್ವತಿ ಭಜನಾ ಮಂಡಳಿ ಕೈಕಾರ, ಮಹಮ್ಮಾಯಿ ಭಜನಾ ಮಂಡಳಿ ಪುಣಚ, ಶ್ರೀರಾಮ ಭಜನಾ ಮಂಡಳಿ ಬಂಗಾರಡ್ಕ, ಶನೀಶ್ವರ ಭಜನಾ ಮಂಡಳಿ ಬನ್ನೂರು, ಷಣ್ಮುಖ ಕುಣಿತ ಭಜನಾ ಮಂಡಳಿ ಮುಂಡೂರು ಇವರಿಂದ ಕುಣಿತ ಭಜನೆ, ಬೊಂಬೆ ಕುಣಿತ, ಕೀಲು ಕುದುರೆ, ಚೆಂಡೆ, ಬ್ಯಾಂಡ್, ವಾಲಗಗಳು ಮೆರವಣಿಗೆಯಲ್ಲಿ ಆಕರ್ಷಣೆಯಾಗಿತ್ತು.ಹಸಿರು ಹೊರೆಕಾಣಿಕೆ ತುಂಬಿದ ನೂರಾರು ವಾಹನಗಳು ಮೆರವಣಿಗೆಯಲ್ಲಿ ಸಾಗಿ ಬಂದವು.ದೇವಸ್ಥಾನಕ್ಕೆ ಆಗಮಿಸಿದ ಬಳಿಕ ದೇವರ ಮುಂಭಾಗದಲ್ಲಿ ಪೂಜೆ ಸಲ್ಲಿಸಿ ಅಕ್ಕಿ, ಎಣ್ಣೆ, ತರಕಾರಿ, ಸಕ್ಕರೆ, ಬೇಳೆಕಾಳು, ಬೆಲ್ಲ, ತೆಂಗಿನಕಾಯಿ, ಸಿಯಾಳ ಮತ್ತಿತರ ಸುವಸ್ತುಗಳನ್ನು ಉಗ್ರಾಣದಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಯಿತು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗೌರವಾಧ್ಯಕ್ಷರಾದ ಡಾ.ಸುರೇಶ್ ಪುತ್ತೂರಾಯ, ಸಂಜೀವ ಪೂಜಾರಿ ಕೂರೇಲು, ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ದೇವಸ್ಯ, ಕಾರ್ಯದರ್ಶಿ ಗಿರೀಶ್ ಕಿನ್ನಿಜಾಲು, ಧನುಷ್ ಹೊಸಮನೆ, ಕೋಶಾಧಿಕಾರಿ ವಿಜಯ ಬಿ.ಎಸ್., ಉಪಾಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಮಹಾಬಲ ರೈ ವಳತ್ತಡ್ಕ, ಜಗಜೀವನ್ದಾನ್ ರೈ ಚಿಲ್ಕೆತ್ತಾರು, ರಾಮ ಭಟ್ ಮಚ್ಚಿಮಲೆ, ನಾರಾಯಣ ನಾಯ್ಕ ಗೆಣಸಿನಕುಮೇರು, ಸದಸ್ಯರಾದ ಯತೀಶ್ ದೇವ ಸಂಟ್ಯಾರ್, ನಾಗೇಶ್ ಸಂಪ್ಯ, ಅಭಿಲಾಷ್ ರೈ ಬಂಗಾರಡ್ಕ, ಚೇತನ್ ಗೌಡ ದೇವಸ್ಯ, ರಾಮಚಂದ್ರ ಕುಲಾಲ್, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ನಗರ ಸಭಾ ಮಾಜಿ ಅಧ್ಯಕ್ಷ ಜಗದೀಶ ಶೆಟ್ಟಿ ನೆಲ್ಲಿಕಟ್ಟೆ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು, ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕಂಬಳತ್ತಡ್ಕ, ಸೀತಾರಾಮ ರೈ ಕೈಕಾರ, ಸದಸ್ಯರಾದ ದಾಮೋದರ ರೈ ತೊಟ್ಟ, ದೇವಯ್ಯ ಗೌಡ, ಕಿಶೋರ್ ಮರಿಕೆ, ಹೊರೆಕಾಣಿಕೆ ಸಮಿತಿ ಸಹ ಸಂಚಾಲಕ ಹರೀಶ್ ನಾಯಕ್ ವಾಗ್ಗೆ ರೋಹಿತ್ ಕಾರ್ಪಾಡಿ, ಪ್ರಮುಖರಾದ ಕೃಷ್ಣಪ್ರಸಾದ್ ನನ್ಸಾರ್, ಭಗವಾನ್ದಾಸ್ ರೈ, ಸುಬ್ಬು ಸಂಟ್ಯಾರ್, ಶರತ್ ಆಳ್ವ ಕೂರೇಲು, ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರದೀಪಕೃಷ್ಣ, ನಗರ ಸಭಾ ಸದಸ್ಯ ರಮೇಶ್ ರೈ, ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಲಕ್ಷ್ಮಣ ಬೈಲಾಡಿ, ಸುಹಾಸ್ ಮರಿಕೆ, ಆರ್ಯಾಪು ಗ್ರಾ.ಪಂ ಸದಸ್ಯ ಸುಬ್ರಹ್ಮಣ್ಯ ಬಲ್ಯಾಯ, ಸಂದೀಪ್ ರೈ ಚಿಲ್ಕೆತ್ತಾರು, ನವೀನ್ ಕುಲಾಲ್, ಸದಾಶಿವ ಶೆಟ್ಟಿ ಪಟ್ಟೆ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.
ಗೊನೆ ಮುಹೂರ್ತ, ಬಲ್ಲೇರಿ ಮಲೆಯಿಂದ ಮೃತ್ತಿಕೆ ಪ್ರಸಾದ:
ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದು ಏ.28ರಂದು ನಡೆಯಲಿರುವ ದೇವರ ವರ್ಷಾವಧಿ ಜಾತ್ರೋತ್ಸವಕ್ಕೆ ಬೆಳಿಗ್ಗೆ ಗೊನೆ ಮುಹೂರ್ತ ನೆರವೇರಿತು.ನಂತರ ಕಾರ್ಪಾಡಿ ಸುಬ್ರಹ್ಮಣ್ಯ ದೇವರ ಮೂಲ ಸ್ಥಳ ಬಳ್ಳೇರಿಮಲೆಗೆ ತೆರಳಿ ಅಲ್ಲಿಂದ ಮೃತ್ತಿಕೆ ಪ್ರಸಾದವನ್ನು ದೇವಸ್ಥಾನಕ್ಕೆ ತರಲಾಯಿತು.
ಇಂದು ಕ್ಷೇತ್ರದಲ್ಲಿ…!:
ಬ್ರಹ್ಮಕಲಶೋತ್ಸವಕ್ಕೆ ಏ.21ರಂದು ಚಾಲನೆ ದೊರೆಯಲಿದ್ದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ಪಾಕ ಶಾಲೆ ಉದ್ಘಾಟನೆ, ಲಾಕರ್ ಉದ್ಘಾಟನೆ, ಕಾರ್ಯಾಲಯ ಉದ್ಘಾಟನೆ, ಅತಿಥಿ ಕೊಠಡಿ ಉದ್ಘಾಟನೆ, ಮುಖ್ಯ ವೇದಿಕೆ ಉದ್ಘಾಟನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಕ್ಷೇತ್ರದ ತಂತ್ರಿಗಳು ಹಾಗೂ ಋತ್ವಿಜರಿಗೆ ಸ್ವಾಗತ, ನಂತರ ದೇವತಾ ಪ್ರಾರ್ಥನೆಯೊಂದಿಗೆ ವಿವಿಧ ವೈದಿಕ ತಾಂತ್ರಿಕ ವಿಽ ವಿಧಾನಗಳಿಗೆ ಚಾಲನೆ, ಸಂಜೆ ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗಮನ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆದ ಬಳಿಕ ವಿದುಷಿ ಮಧುರಾ ಕಾರಂತ್ ಮೈಸೂರು ಇವರಿಂದ ಭರತನಾಟ್ಯ, ಅಭಿನಯ ಕಲಾವಿದರು ಪುತ್ತೂರು ಅಭಿನಯದ ‘ಮಣ್’ (ಕಾರ್ನಿಕದ) ತುಳು ನಿಗೂಢಮಯ ನಾಟಕ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.