Published
2 years agoon
By
Akkare News
ಬಂಟ್ವಾಳ ತಾಲೂಕಿನ ದ ಕ ಜಿ ಪಂ ಹಿ ಪ್ರಾ ಶಾಲೆ ಕೆಲಿಂಜದಲ್ಲಿ ಕರಾಟೆ ತರಗತಿಗಳನ್ನು ಉದ್ಘಾಟನೆ ಮಾಡಲಾಯಿತು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಪೆಲತ್ತಡ್ಕ ಉದ್ಘಾಟನೆ ಮಾಡಿ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿ ಶುಭ ಹಾರೈಸಿದರು. ಕರಾಟೆ ಶಿಕ್ಷಕರಾದ ಮಾಧವ ಮೈರ ಕರಾಟೆಯ ಪ್ರಯೋಜನಗಳನ್ನು ಮಕ್ಕಳಿಗೆ ತಿಳಿದರು. ಎಸ್ ಡಿ ಎಂ ಸಿ ಅಧ್ಯಕ್ಷೆ ಜಯಂತಿ, ಹಳೆ ವಿದ್ಯಾರ್ಥಿ ಶ್ರೀಧರ್ ಟೈಲರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್ ಸ್ವಾಗತಿಸಿದರು.ಸಹಶಿಕ್ಷಕಿ ಆಶ್ವಿತ ವಂದಿಸಿದರು.ಸಹಶಿಕ್ಷಕಿ ನಳಿನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.