Published
5 months agoon
By
Akkare Newsಪುತ್ತೂರು: ಪುತ್ತೂರು ನಗರಸಭೆಗೆ ಸದಸ್ಯರನ್ನಾಗಿ ನಾಲ್ಕು ಮಂದಿಯ ಹೆಸರನ್ನು ರಾಜ್ಯ ಸರಕಾರ ನಾಮ ನಿರ್ದೇಶನ ಮಾಡಿ ಆದೇಶಿಸಿದೆ.
ಕೃಷ್ಣ ಫಾರ್ಮ್ ಹೌಸ್ ನ ಚಿದಾನಂದ ರೈ, ಬಲ್ನಾಡು ಉಜ್ರುಪಾದೆ ನಿವಾಸಿ ಶರೀಫ್ ಪಿ. ಬಲ್ನಾಡು, ಬನ್ನೂರು ಜೈನರಗುರಿ ನಿವಾಸಿ ಶಾರದಾ ಅರಸ್, ಪರ್ಲಡ್ಕ ನಿವಾಸಿ ಅಹ್ಮದ್ ಬಶೀರ್ ರನ್ನು ನಗರಸಭಾ ನಾಮ ನಿರ್ದೇಶಿತ ಸದಸ್ಯರಾಗಿ ಸರ್ಕಾರ ಆದೇಶಿಸಿದೆ.