Published
12 months agoon
By
Akkare News
ಬೆಳಂದೂರು, ಜೂ. 14. ಬರೆಪ್ಪಾಡಿ ಪಂಚಲಿಂಗೇಶ್ವರ ಹಾಗೂ ಕೇಪುಳೇಶ್ವರ ದೇವಸ್ಥಾನಕ್ಕೆ ಶನಿವಾರದಂದು ಭೇಟಿ ನೀಡಿದ ಸ್ಪೀಕರ್ ಯುಟಿ ಖಾದರ್ ಅವರು ದೇವಸ್ಥಾನದ ಕಾಮಗಾರಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಜತ್ತಪ್ಪ ರೈ ಬರೆಪ್ಪಾಡಿ, ಸದಸ್ಯರಾದ ವಸಂತ ಪೂಜಾರಿ, ನಿರ್ಮಲ ಕೇಶವ ಗೌಡ, ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಲೋಕೇಶ್ ಬಿ ಎನ್, ದೇವಸ್ಥಾನದ ಮಾಜಿ ಅಧ್ಯಕ್ಷ ವಿಠಲ ಗೌಡ, ಬೆಳಂದೂರು ಪಂಚಾಯತ್ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಪಿಡಿಒ ನಾರಾಯಣ, ಮಾಜಿ ಅಧ್ಯಕ್ಷೆ ಪಾರ್ವತಿ ಮರಕ್ಕಡ, ಪಂಚಾಯತ್ ಸದಸ್ಯ ಪ್ರವೀಣ್ ಕುಮಾರ್, ಸುಧೀರ್ ಕುಮಾರ್, ಫಝಲ್ ಕೋಡಿಂಬಾಳ, ಸತೀಶ್ ಕುಮಾರ್ ಕೆಡೆಂಜಿ, ಶೀನಪ್ಪ ಗೌಡ ಬೈತಡ್ಕ, ವಿಜಯ ಕುಮಾರ್ ಸೊರಕೆ, ಅವಿನಾಶ್ ಬೈತಡ್ಕ ನವಾಝ್ ಸಖಾಫಿ ಪಳ್ಳತ್ತಾರು, ಶಂಸುದ್ದೀನ್ ಪಳ್ಳತ್ತಾರು ಹಾಗೂ ಅಕ್ಷಯ್ ಡಿ ಮೊದಲಾದವರು ಉಪಸ್ಥಿತರಿದ್ದರು.