Published
10 months agoon
By
Akkare News
ದಾವಣಗೆರೆ: ಅಕ್ರಮ ಸಂಬಂಧ ಹೊಂದಿದ್ದ ಅಳಿಯನೊಂದಿಗೇ 48 ವರ್ಷದ ಅತ್ತೆ ಓಡಿ ಹೋದ ಪ್ರಕರಣ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ಅಳಿಯ ಗಣೇಶ್ (24ವರ್ಷ) ಹಾಗೂ ಅತ್ತೆ ಶಾಂತಾ (48ವರ್ಷ) ಓಡಿಹೋಗಿದ್ದು ಇಬ್ಬರೂ ಕಾಣೆಯಾಗಿರುವ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮೇ 2 ರಂದು ಪ್ರತ್ಯೇಕ ದೂರುಗಳು ದಾಖಲಾಗಿವೆ. ಹೇಮಾವತಿ ಎಂಬುವರು ತನ್ನ ಗಂಡ ಗಣೇಶ್, ತನ್ನನ್ನು ಬಂಕ್ ಬಳಿ ನಿಲ್ಲಿಸಿ ಇಲ್ಲೇ ಹೋಗಿ ಬರುವುದಾಗಿ ಹೇಳಿ ಹೋದವರು ಇನ್ನೂ ಬಂದಿಲ್ಲ ಎಂದು ದೂರು ನೀಡಿದರೆ, ಶಾಂತಾಳ ಸಂಬಂಧಿ ಪೂಜಾ ಎಂಬುವರು ಅದೇ ದಿನ ತನ್ನ ಸಂಬಂಧಿ ಶಾಂತಾ ಕಾಣೆಯಾಗಿದ್ದಾರೆಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಓಡಿ ಹೋದ ಜೋಡಿ ಕೌಟುಂಬಿಕ ಸಂಬಂಧದಲ್ಲಿ ಅತ್ತೆ- ಅಳಿಯನಾಗಿದ್ದರೂ, ಮದುವೆ ಮಾಡಿಕೊಟ್ಟಿರುವ ಮಗಳು ಹೇಮಾವತಿಯು ಶಾಂತಾಳ ಸ್ವಂತ ಮಗಳಲ್ಲ. ತನ್ನ ಗಂಡನ ಮೊದಲ ಹೆಂಡತಿಯ ಮಗಳಾಗಿದ್ದು ಶಾಂತಾ ಮಲತಾಯಿ ಆಗಿದ್ದಾಳೆ.
ಶಾಂತಾ ಮೂರ್‍ನಾಲ್ಕು ವರ್ಷಗಳ ಹಿಂದೆಯೇ ಮರವಂಜಿಯ ಗಣೇಶ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳಲು ಆಕೆ ತನ್ನ ಮಲಮಗಳು (ಗಂಡನ ಮೊದಲ ಹೆಂಡತಿಯ ಮಗಳು) ಹೇಮಾವತಿಯನ್ನು 25 ದಿನಗಳ ಹಿಂದಷ್ಟೇ ತಾನೇ ಮುಂದಾಗಿ ನಿಂತು ತಾನು ಸಂಬಂಧ ಇಟ್ಟುಕೊಂಡ ಯುವಕನೊಂದಿಗೆ ಮದುವೆ ಮಾಡಿಸಿದ್ದಳು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರ ಮೊಬಲ್‌ನಲ್ಲಿದ್ದ ಚಾಟ್, ಪೋಟೊಗಳಿಂದ ಅಕ್ರಮ ಸಂಬಂಧ ಬಹಿರಂಗಗೊಂಡಾಗ ಬೆದರಿದ ಶಾಂತಾ, ಯುವಕನೊಂದಿಗೆ ಪರಾರಿಯಾಗಿದ್ದಾಳೆ.