Connect with us

ಸ್ಥಳೀಯ

ಅಡಿಕೆ ಕೊಳೆರೋಗ ವಿಚಾರ : ಸಿಎಂ ಜೊತೆ ಶಾಸಕ ಅಶೋಕ್ ರೈ ಮಾತುಕತೆ

Published

on

ಪುತ್ತೂರು: ದ ಕ ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಭಾದಿಸಿದ್ದು ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಶಾಸಕ ಅಶೋಕ್ ರೈ ಮಾತುಕತೆ ನಡೆಸಿದರು.

ಆ.13ರಂದು ಮುಖ್ಯಮಂತ್ರಿ ಅವರನ್ನು ಭೇಟಿಯಾದ ಶಾಸಕ ಅಶೋಕ್‌ ರೈ ಈ ಬಾರಿ ಕರಾವಳಿಯಲ್ಲಿ ವಿಪರೀತ ಮಳೆಯಾಗಿದ್ದು,ಈ ಕಾರಣಕ್ಕೆ ಅಡಿಕೆಗೆ ಕೊಳೆರೋಗ ಉಂಟಾಗಿದೆ. ಅಡಿಕೆಯನ್ನೇ ನಂಬಿ ದ.ಕ‌ ಜಿಲ್ಲೆಯ ಬಹುತೇಕ ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ.‌ ಅಡಿಕೆ ನಾಶವಾದರೆ ಅವರ ಬದುಕು ದುಸ್ತರವಾಗುತ್ತದೆ. ಈ ನಿಟ್ಟಿನಲ್ಲಿ ಕೊಳೆರೋಗ ಉಂಟಾದ ಕಡೆಗಳಲ್ಲಿ ಸಮೀಕ್ಷೆ ನಡೆಸುವ‌ ಮೂಲಕ ಕೃಷಿಕರಿಗೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.

ಅಧಿವೇಶನದಲ್ಲಿ ಇಂದು(ಆ.14) ಅಡಿಕೆ ವಿಚಾರದ ಬಗ್ಗೆ ಶಾಸಕ ಅಶೋಕ್ ರೈ ಪ್ರಶ್ನೆ ಕೇಳಲಿದ್ದು, ಇದರ‌,ಮುನ್ನಾ ದಿನ ಸಿಎಂ ಜೊತೆ ಮಾತುಕತೆ ನಡೆಸಿರುವುದು ಕೃಷಿಕರಲ್ಲಿ‌ ಭರವಸೆಯನ್ನು ಮೂಡಿಸಿದೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version