Connect with us

ಇತರ

ಬಂಟ್ವಾಳ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

Published

on

ಬಂಟ್ವಾಳ : ಮಂಚಿ ಗ್ರಾಮದ ಪಂಜಾಲ ಕ್ರಾಸ್‌ನಲ್ಲಿ ನಿಷೇಧಿತ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮೇ 2ರಂದು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು: 1. ಮೊಹಮ್ಮದ್ ನಿಜಾಮುದ್ದೀನ್ (30) 2. ಮೊಹಮ್ಮದ್ ಶಾಹೀನ್ (19) – ಇಬ್ಬರೂ ಬೋಳಂತೂರು ನಿವಾಸಿಗಳು ವಶಪಡಿಸಿಕೊಂಡ ವಸ್ತುಗಳು: – ಎಂಡಿಎಂಎ*: 423 ಗ್ರಾಂ – ಮೌಲ್ಯ ₹42.30 ಲಕ್ಷ – 3 ಮೊಬೈಲ್ ಫೋನ್‌ಗಳು – ಬೊಲೆರೊ ವಾಹನ*: KA20 9585 ನೋಂದಣಿ ಸಂಖ್ಯೆ – ಒಟ್ಟು ವಶಪಡಿಸಿಕೊಂಡ ಸೊತ್ತಿನ ಮೌಲ್ಯ*: ₹46.25 ಲಕ್ಷ ಘಟನೆಯ ವಿವರ: ಪಿಎಸ್‌ಐ ಮಂಜುನಾಥ್ ಟಿ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾದ ವ್ಯಕ್ತಿಯಿಂದ ಎಂಡಿಎಂಎ ಖರೀದಿಸಿ, ಮಾರಾಟ ಮಾಡಲು ಸಾಗಿಸುತ್ತಿದ್ದುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.   ‘

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version