Connect with us

ಇತರ

ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಶನ್ ಮಂಗಳೂರು ಆಶ್ರಯದಲ್ಲಿ ಸೇವಾ ಸಂಭ್ರಮ. 14ನೇ ಮತ್ತು 15ನೇ ಮನೆ ಹಸ್ತಾಂತರ : ಸದಾನಂದ ಪೂಜಾರಿ

Published

on

ಮಂಗಳೂರು, ಮೇ 12- ಬಿಲ್ಲವ ಬ್ರಿಗೇಡ್ ಮತ್ತು ನಂದಾದೀಪ ಫೌಂಡೇಶನ್ ಮಂಗಳೂರು ಆಶ್ರಯದಲ್ಲಿ ನಿರ್ಮಿಸಲಾದ 14ನೇ ಮತ್ತು 15ನೇ ಮನೆ ಹಸ್ತಾಂತರ ಕಾರ್ಯಕ್ರಮ ಬಿಲ್ಲವ ಬ್ರಿಗೇಡ್‌ ಸಂಸ್ಥಾಪಕ ಸದಾನಂದ ಪೂಜಾರಿ ನೇತೃತ್ವದಲ್ಲಿ ಎ. 25ರಂದು ಶನಿವಾರ ಬಂಟ್ವಾಳ ಬ್ರಹ್ಮರಕೊಟ್ಟುನ ಪಂಬದಬೆಟ್ಟು ಕ್ರೀಡಾಂಗಣದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದ‌ರ್, ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ಕಿಶೋರ್ ಪುತ್ತೂರು, ಮಾಜಿ ಶಾಸಕ ರಮಾನಾಥ ರೈ, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಕಂಬಳ ಅಸೋಸಿಯೇಶನ್ ಗೌರವಾಧ್ಯಕ್ಷ ಭಾಸ್ಕ‌ರ್ ಎಸ್. ಕೋಟ್ಯಾನ್, ಪ್ರಮುಖರಾದ ಭುವನೇಶ್ ಪಚ್ಚಿನಡ್ಕ, ಹರಿಕೃಷ್ಣ ಬಂಟ್ವಾಳ, ಮಾಲಿಕಯ್ಯ ಗುತ್ತೇದಾರ್, ಶರಣ್ ಪಂಪ್‌ವೆಲ್, ರುಕ್ಷ್ಮಯ ಪೂಜಾರಿ, ಜಗದೀಪ್ ಡಿ. ಸುವರ್ಣ,ಅಜಿತ್ ಪೂಜಾರಿ ಉದ್ಯಮಿ ದುಬೈ, ಕೆ.ಟಿ. ಸುವರ್ಣ,ಸದಾನಂದ ಪೂಜಾರಿ (ಸಂಸ್ಥಾಪಕರು) ಬಿಲ್ಲವ ಬ್ರಿಗೇಡ್ ಮಂಗಳೂರು ನಂದಾದೀಪ ಫೌಂಡೇಶನ್ ರವಿ ಶಾಂತಿ ಮರೋಳಿ, ಗಂಗಾಧರ ಪೂಜಾರಿ ಮುಂಬಯಿ, ಹರೀಶ್ ಸಾಲಿಯಾನ್ ಬಜಗೋಳಿ, ಬಿಲ್ಲವ ಬ್ರಿಗೇಡ್‌ನ ದೀಪಕ್ ಪೂಜಾರಿ ಅಡು ಮರೋಳಿ, ಸಂದೇಶ್ ಪೂಜಾರಿ ಮುಕ್ಕ, ಅವಿನಾಶ್ ಸುವರ್ಣ, ನಿಶಾನ್ ಪೂಜಾರಿ, ಪ್ರವೀಣ್ ಪೂಜಾರಿ ಎಕ್ಕೂರು, ದೀಪಕ್ ಪೂಜಾರಿ, ಪ್ರಶಾಂತ್ ಪೂಜಾರಿ ಕೃಷ್ಣಪ್ಪ ಪೂಜಾರಿ, ಯಶವಂತ್ ದೆರಾಜೆ, ಗಣೇಶ್ ಸುವರ್ಣ ತುಂಬೆ, ಶಿವಪ್ರಸಾದ್, ಉದಯ ನಗ್ರಿ, ಪುರುಷ ಸಾಲಿಯಾನ್, ಶಶಿಧರ್ ಬ್ರಹ್ಮರಕೊಟ್ಟು, ಪ್ರಕಾಶ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು. ಬಿಲ್ಲವ ಬ್ರಿಗೇಡ್‌ನಿಂದ ನಿರ್ಮಿಸಲಾದ 14 ಮತ್ತು 15ನೇ ಮನೆಯ ಫಲಾನುಭವಿಗಳಿಗೆ ಕೀ ಹಸ್ತಾಂತರ ನಡೆಯಿತು.    

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಅಜೇಯ್ ದಂಪತಿ, ದಿಶ ಪೂಜಾರಿ, ವಾಸು ಶಾಂತಿ ಗರೋಡಿ, ನಾರಾಯಣ್ ನಾಯ್ಕ, ಸುಧೀರ್‌ಕುಮಾರ್ ಜಾರಂದಗುಡ್ಡೆ, ಪ್ರಾಪ್ತಿ ಎಲ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಸಂಜೆ 8ರಿಂದ ನಡೆದ ಮ್ಯೂಸಿಕಲ್ ಸ್ಟಾರ್‌ನೈಟ್ ಕಾರ್ಯಕ್ರಮದಲ್ಲಿ ಸ್ಟಾಂಡಲ್‌ವುಡ್, ಕೋಸ್ಟಲ್‌ವುಡ್ ಕಲಾವಿದರು, ಹಿನ್ನಲೆ ಗಾಯಕರು ಸೇರಿದಂತೆ ನಾನಾ ಕ್ಷೇತ್ರದ ಕಲಾವಿದರು, ಸೆಲೆಬ್ರಿಟಿಗಳು ಭಾಗವಹಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version