Connect with us

ಇತರ

ಯಕ್ಷಗಾನದಲ್ಲಿ ಸನಾತನ ಹಿಂದೂ ಧರ್ಮದ ದೈವದೇವರ ಅವಹೇಳನ ಕಲಾವಿದರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ : ಧನ್ಯಕುಮಾ‌ರ್ ಬೆಳಂದೂರು

Published

on

ಪುತ್ತೂರು: ಧನ್ಯಕುಮಾ‌ರ್ ಬೆಳಂದೂರು ಎಂಬ ಹೆಸರಿನವನಾದ ನಾನು ಕಳೆದ ಅನೇಕ ವರ್ಷಗಳಿಂದ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡು ಧರ್ಮ ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡವನಾಗಿದ್ದು ಮತ್ತು ಸಮಾಜಿಕ ಕಳಕಳಿ ಉಳ್ಳವನಾಗಿ ಸಮಾಜಿಕ ಹೋರಾಟಗಾರನು ಹೌದು ಹಾಗೂ ತುಳುನಾಡಿನ ದೈವದೇವರ ಅರಾಧಕನು ಕೂಡ ಆಗಿದ್ದು ಅದರಲ್ಲೂ ವಿಶೇಷವಾಗಿ ಕಾಳಮ್ಮ ಶಕ್ತಿ ಬಗ್ಗೆ ಅಪಾರ ಗೌರವವನ್ನಿಟ್ಟು ಕೊಂಡಿರುವವ ಮತ್ತು ಯಕ್ಷಗಾನದ ಅಭಿಮಾನಿಯು ಕೂಡ ಹೌದು ಆದರೆ ಇತ್ತೀಚೆಗೆ ನಾನು ನನ್ನ ಮೊಬೈಲ್ ವೀಕ್ಷಿಸುತ್ತಿರುವಾಗ ಒಂದು ವೀಡಿಯೋ ಕಂಡು ಬಂದಿದ್ದು ಅದರಲ್ಲಿ ಸುಮಾರು 55 ವರ್ಷ ಪ್ರಾಯದ ಸುಂದರ್ ರೈ ಮಂದಾರ, ಮಂದಾರ ಮನೆ ಒಳಮೊಗ್ರು ಗ್ರಾಮ ಪುತ್ತೂರು ತಾಲೂಕು ಮತ್ತು ದಿನೇಶ್ ಶೆಟ್ಟಿಗಾ‌ರ್ ಕೊಡಪದವು ಮತ್ತಿತರರು ನಮ್ಮ ಟಿವಿ ಕುಡ್ಲ ಎಂಬ ಚಾನಲ್ ನಲ್ಲಿ ಯಕ್ಷ ತೆಳಿಕೆ ಎಂಬ ಕಾರ್ಯಕ್ರಮದಲ್ಲಿ “ಸಾವುದಾನ ಮಾಡಿಕೊಳ್ಳ ಬೇಕಮ್ಮ ಎನ್ನುತ್ತಿದ್ದು ಹುಣ್ಣಿಮೆಯ ಮರು ದಿವಸ ಅಮವಾಸ್ಯೆಯ ದಿನದಂದು ಕಾಡಿನಲ್ಲಿರುವ ದುಷ್ಕೃ ಶಕ್ತಿಯನ್ನು ನಿಗ್ರಹಿಸುವ ಕಾಳಮ್ಮನಾದ ನಾನು ನಾಡಿನಲ್ಲಿರುವ ಭಕ್ತರನ್ನು ಉದ್ಧರಿಸುವ ಉದ್ದೇಶವನ್ನು ಇಟ್ಟುಕೊಂಡು ಎನ್ನುತ್ತ ಭಾಗವತರನ್ನು ಉದ್ದೇಶಿಸಿ ನಿಮ್ಮಲ್ಲಿ ಮರ್ಲ್ ಕಟ್ಟಿದ ಹಾಗೆ ನನ್ನಲ್ಲಿ ಮರ್ಲ್ ಕಟ್ಟಲು ಬಿಡಬೇಡಿ ಎಂದು ಇತರ ಸಹ ಕಲಾವಿದರಿಗೆ ಸುಂದರ್ ರೈ ಮಂದಾರ ಹೇಳುತ್ತಿದ್ದು ಮತ್ತು ಭಕ್ತರೆ ವರ್ಷಂಪ್ರತಿ ನೀಡುವ ನರಬಲಿಯನ್ನು ನೀಡಿದ್ದೀರ ಎನ್ನುತ್ತ ನಿಧಿ ಬಗ್ಗೆ ಪ್ರಸ್ತಾಪಿಸುತ್ತ ನಮ್ಮ ಇಷ್ಮಾರ್ಥವನ್ನು ನೆರವೇರಿಸುವುದಕ್ಕಾಗಿ ನರಬಲಿ ನೀಡಬೇಕಲ್ಲವೆ ಎಂದು ಸುಂದರ್ ರೈ ಮಂದಾರ ಪ್ರಶ್ನಿಸುತ್ತಿದ್ದು ಅದಕ್ಕೆ ನರಬಲಿ ಸಿಕ್ಕಿಲ್ಲ ಹಾಗಾಗಿ ಪೊನ್ನು ನರವನ್ನು ಹಿಡ್ಕೊಂಡು ಬಂದಿದ್ದೇವೆ” ಎಂದು ದಿನೇಶ್ ಕೊಡಪದವು ಹೇಳುತ್ತಿರುವುದು ಕಂಡು ಬರುತ್ತದೆ.
ಹಾಗೆಯೇ ತುಳುನಾಡಿನ ದೈವಗಳ ಬಗ್ಗೆ ಮತ್ತು ಹಿಂದೂ ಧರ್ಮದ ಸಂಸ್ಕೃತಿಯ ಬಗ್ಗೆ ತೀರ ಕೆಳಮಟ್ಟದಲ್ಲಿ ಅಪಹಾಸ್ಯ ಮಾಡಿ ದೈವದೇವರ ಅವಹೇಳನ ಮಾಡಿದ್ದು ಇದನ್ನು ನೋಡಿ ನನ್ನ ಮನಸ್ಸಿಗೆ ತೀವು ಘಾಸಿಯಾಗಿದ್ದು ನನ್ನ ಧಾರ್ಮಿಕ ಭಾವನೆಗೆ ದಕ್ಕೆಯಾಗಿರುತ್ತದೆ ಅದುದರಿಂದ ಮೇಲೆ ತಿಳಿಸಿದ ಎಲ್ಲರ ಮೇಲೆ ತಕ್ಷಣ ಪ್ರಥಮ ವರ್ತಮಾನ ಪಟ್ಟಿ ತಯಾರಿಸಿ ವಿಚಾರಣೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕಾಗಿ ಈ ಮೂಲಕ ವಿನಂತಿಯನ್ನು ಮಾಡ್ತಾ ಇದ್ದೇನೆ.

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version