Published
2 months agoon
By
Akkare News
ಪುತ್ತೂರು: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಕೊಯಕ್ಕುಡೆ- ಗಾಣಂತಿ-20 ಕೈಲಾಜೆ ಮತ್ತು ಹೊಸಮನೆ ಭಾಗಕ್ಕೆ ತೆರಳುವ ರಸ್ತೆಯನ್ನು ಖಾಸಗಿ ವ್ಯಕ್ತಿ ಬಂದ್ ಮಾಡಿದ್ದು ಈ ಬಗ್ಗೆ ಆ ಭಾಗದ ನಿವಾಸಿಗಳು ಶಾಸಕ ಅಶೋಕ್ ರೈ ಗೆ ಮನವಿ ಸಲ್ಲಿಸಿ ರಸ್ತೆ ನಿರ್ಮಾಣಕ್ಕೆ ನೆರವು ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ನಾವು ಸುಮಾರು ಮನೆಯವರು ಅನೇಕ ವರ್ಷಗಳಿಂದ ಸಂಚಾರ ಮಾಡಿಕೊಂಡಿರುವ ನಮ್ಮ ರಸ್ತೆಯನ್ನು ಸಂಪರ್ಕಿಸುವ ಪಂಚಾಯತ್ ರಸ್ತೆಯ ಕಾಡಮನೆ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಣ ಮಾಡಿ ರಸ್ತೆಯನ್ನು ಬಂದ್ ಮಾಡಿರುತ್ತಾರೆ. ನಮ್ಮ ಪಂಚಾಯತ್ ರಸ್ತೆಯನ್ನು ಅತಿಕ್ರಮಣ ಮಾಡಿ ಈ ರಸ್ತೆಯಲ್ಲಿ ಅಡಿಕೆ ಸಸಿಯನ್ನು ನೆಟ್ಟಿರುತ್ತಾರೆ ಹಾಗೂ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ರಸ್ತೆಯನ್ನು ನಿರ್ಮಿಸಿರುವುದು ಕಂಡು ಬಂದಿದೆ.
ಈ ಬಗ್ಗೆ ನಾವು ಗ್ರಾಮಪಂಚಾಯತ್ ಗೆ ಎರಡು ಬಾರಿ ಅರ್ಜಿ ಸಲ್ಲಿಸಿ ಮನವಿ ಮಾಡಿಕೊಂಡಿದ್ದು, ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ. ಈ ಬಗ್ಗೆ ತಾವು ಸ್ಥಳ ತನಿಖೆ ಮಾಡಿ ರಸ್ತೆಯಲ್ಲಿ ನೆಟ್ಟ ಅಡಿಕೆ ಸಸಿಯನ್ನು ತೆರವುಗೊಳಿಸಿ ನಮಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಮತ್ತು ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಮಾಡಿಕೊಡುವಂತೆ ಮನವಿ ಮಾಡಿದರು. ಈ ವೇಳೆ ಕೊರಗಪ್ಪ ಗೌಡ ಕೈಲಾಜೆ
ದರ್ನಪ್ಪ ಗೌಡ
ಜನಾರ್ಧನ ಹೊಸಮನೆ
ಜಾನಕಿ
ಹೇಮಂತ ಕೊಯಕಡೆ
ನಾನಿಮಿ ಕೈಲಾಜೆ
ಜಾನಕಿ ಕೈಲಾಜೆ
ಜಯಂತಿ ಹೊಸಮನೆ
ಶಶಿಧರ್ ಕೈಲಾಜೆ
ತೇಜಸ್ ಹೊಸಮನೆ
ಪುನೀತ್ ಕೈಲಾಜೆ
ನಾರಾಯಣ ಪೂಜಾರಿ ಗಾಣಂತಿ
ಬಾಳಪ್ಪ ಕೈಲಾಜೆ
ಬಾಬು ಗೌಡ ಕೊಯಕ್ಕುಡೆ
ರವೀಂದ್ರ ಕೈಲಾಜೆ
ಲೋಕೇಶ್ ಪಡ್ಡಾಯೂರು ಉಪಸ್ಥಿತರಿದ್ದರು.